11
ದೇವರ ಇಬ್ಬರು ಸಾಕ್ಷಿಗಳು
ತರುವಾಯ *ಅಳತೆಗೊಲಿನಂಥ ಒಂದು ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು, “ನೀನೆದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಅಳತೆಮಾಡಿ ಆಲಯದಲ್ಲಿ ಆರಾಧನೆಮಾಡುವವರನ್ನು ಎಣಿಕೆಮಾಡು. ಆಲಯದ ಹೊರಗಿರುವ ಹೊರಾಂಗಣವನ್ನು ಅಳೆಯದೆ ಬಿಟ್ಟುಬಿಡು, ಅದು ಅನ್ಯಜನರಿಗಾಗಿ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು §ನಲವತ್ತೆರಡು ತಿಂಗಳು ತುಳಿದಾಡುವರು. ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು *ಗೋಣಿತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.” ಭೂಲೋಕದ ಒಡೆಯನ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಮತ್ತು ಎರಡು ದೀಪಸ್ತಂಭಗಳೂ ಇವರೇ. ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ ಇವರ ಬಾಯೊಳಗಿಂದ ಬೆಂಕಿಯು ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಕೇಡನ್ನು §ಉಂಟುಮಾಡಬಯಸುವವರಿಗೆ ಆ ರೀತಿಯಾಗಿ ಹತರಾಗಬೇಕು. *ಅವರು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಅವರಿಗೆ ಇರುವುದು. ಇದಲ್ಲದೆ ಅವರಿಗೆ ಇಷ್ಟಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವುದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹಿಂಸಿಸುವುದಕ್ಕೂ ಅಧಿಕಾರವುಂಟು.
ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ, §ಅಧೋಲೋಕದಿಂದ ಬರುವ *ಮೃಗವು ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು. ಈ ಸಾಕ್ಷಿಗಳ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಸಾಂಕೇತಿಕವಾಗಿ §ಸೊದೋಮ್ ಎಂದು, *ಐಗುಪ್ತ ಎಂದೂ ಹೆಸರುಗಳುಂಟು. ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟಿದ್ದನು. ಸಕಲ ಜನ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುವರು ಮತ್ತು ಅವರ ಶವಗಳನ್ನು ಸಮಾಧಿಯಲ್ಲಿ ಇಡಗೊಡಿಸುವುದಿಲ್ಲ. 10 ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು §ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು. 11 ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಶ್ವಾಸವು ಬಂದು ಆ ಶವಗಳಲ್ಲಿ ಪ್ರವೇಶಿಸಲು, *ಅವರು ಕಾಲೂರಿ ನಿಲ್ಲುವರು. ಅವರನ್ನು ನೋಡಿದವರೆಲ್ಲರೂ ಭಯದಿಂದ ನಡುಗಿದರು. 12 ಅನಂತರ ಅವರಿಗೆ, “ಇಲ್ಲಿ ಮೇಲಕ್ಕೆ ಏರಿ ಬನ್ನಿರಿ!” ಎಂದು ಆಕಾಶದಿಂದ ಮಹಾ ವಾಣಿಯು ತಿಳಿಸಿತು. ಅದನ್ನು ಕೇಳಿ ಅವರು ಮೇಘದಲ್ಲಿ §ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು. 13 ಅದೇ ಗಳಿಗೆಯಲ್ಲಿ *ಮಹಾ ಭೂಕಂಪವುಂಟಾಗಿ ಆ ಪಟ್ಟಣದ ಹತ್ತರಲ್ಲೊಂದಂಶವು ಬಿದ್ದುಹೋಯಿತು. ಆ ಭೂಕಂಪದಿಂದ ಏಳು ಸಾವಿರ ಮಂದಿ ಸತ್ತು ಹೋದರು. ಉಳಿದವರು ಭಯಗ್ರಸ್ತರಾಗಿ ಪರಲೋಕದ ದೇವರನ್ನು §ಘನಪಡಿಸಿದರು.
14 *ಎರಡನೆಯ ವಿಪತ್ತು ಕಳೆದುಹೋಯಿತು. ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತಿದೆ.
ಏಳನೆಯ ತುತ್ತೂರಿ
15 ಏಳನೆಯ ದೇವದೂತನು ತುತ್ತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ, §“ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ *ಆತನ ಕ್ರಿಸ್ತನಿಗೂ ಬಂದಿದೆ, ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು” ಎಂಬ ಮಹಾಘೋಷಣೆಯಾಯಿತು.
16 ತರುವಾಯ ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಆತನಿಗೆ §ಅಡ್ಡಬಿದ್ದು,
17 “ಕರ್ತನೇ, ಸರ್ವಶಕ್ತನಾದ ದೇವರೇ, *ಇರುವಾತನೇ ಇದ್ದಾತನೇ,
ನೀನು ನಿನ್ನ ಮಹಾ ಅಧಿಕಾರವನ್ನು ವಹಿಸಿಕೊಂಡು ಆಳುತ್ತಿರುವುದರಿಂದ
ನಾವು ನಿನಗೆ ಕೃತಜ್ಞತಾಸುತ್ತಿ ಸಲ್ಲಿಸುತ್ತೇವೆ.
18 ಜನಾಂಗಗಳು ಕೋಪಿಸಿಕೊಂಡವು.
ನಿನ್ನ ಕೋಪವೂ ಪ್ರಕಟವಾಯಿತು.
§ಸತ್ತವರು ತೀರ್ಪುಹೊಂದುವ ಸಮಯವು ಬಂದಿದೆ.
ನೀನು ನಿನ್ನ ದಾಸರಾದ ಪ್ರವಾದಿಗಳಿಗೂ, ದೇವಜನರಿಗೂ,
*ನಿನ್ನ ನಾಮಕ್ಕೆ ಭಯಪಡುವ ಹಿರಿಯರೂ ಕಿರಿಯರೂ ಆಗಿರುವ
ನಿನ್ನ ಭಕ್ತರಿಗೆ ಪ್ರತಿಫಲವನ್ನು ಕೊಡುವುದಕ್ಕೂ ಲೋಕನಾಶಕರನ್ನು ವಿನಾಶಗೊಳಿಸುವ ಕಾಲವು ಬಂದಿದೆ”
ಎಂದು ಆತನನ್ನು ಆರಾಧಿಸಿದರು.
19 ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು. §ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳು, ಭೂಕಂಪವು, *ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು.
* 11:1 ಜೆಕ. 2:1, 2; ಯೆಹೆ. 40. 3:5; ಪ್ರಕ 21:15, 16: 11:2 ಯೆಹೆ. 40. 17, 20: 11:2 ಲೂಕ 21:24: § 11:2 ಪ್ರಕ 12:6; 13:5: * 11:3 ಯೆಶಾ 20:2: 11:4 ಜೆಕ. 4:3, 11, 14: 11:5 2 ಅರಸು. 1:10, 12; ಯೆರೆ 5:14: § 11:5 ಅರಣ್ಯ 16:29, 35: * 11:6 ಅರಣ್ಯ 17:1; ಲೂಕ 4:25; ಯಾಕೋಬ. 5:17: 11:6 ವಿಮೋ 7:19: 11:6 ವಿಮೋ 7-10; 1 ಸಮು 4:8: § 11:7 ಪ್ರಕ 9:1: * 11:7 ಪ್ರಕ 17:8; ಪ್ರಕ 13:1: 11:7 ದಾನಿ. 7:21: 11:8 ಪ್ರಕ 16:19; 17:18; 18:10: § 11:8 ಯೆಶಾ 1:9, 10; 3:9: * 11:8 ಯೆಹೆ. 23:3, 8, 19:27: 11:9 ಕೀರ್ತ 79:2, 3: 11:10 ಪ್ರಕ 11:5, 6; 1 ಅರಸು. 18:17: § 11:10 ಯೋಹಾ 16:20; ಪ್ರಕ 3:10: * 11:11 ಆದಿ 2:7; ಯೆಹೆ. 37:5, 9, 10, 14: 11:12 ಪ್ರಕ 4:1: 11:12 ಅ. ಕೃ. 1:9; 1 ಥೆಸ. 4:17: § 11:12 ಪ್ರಕ 12:5; 2 ಅರಸು. 2:11: * 11:13 ಪ್ರಕ 6:12: 11:13 ಪ್ರಕ 16:19: 11:13 2 ಪೂರ್ವ 36:23; ಯೋನ. 1:9: § 11:13 ಯೆಹೋ. 7:19; ಪ್ರಕ 14:7; 16:9, 19:7: * 11:14 ಪ್ರಕ 8:13; 9:12: 11:14 ಪ್ರಕ 10:7 11:15 ಪ್ರಕ 16:17; 19:1: § 11:15 ಪ್ರಕ 12:10: * 11:15 ಕೀರ್ತ 2:2; ಲೂಕ 9:20; ಅ. ಕೃ. 4:26: 11:15 ದಾನಿ. 2:44; 7:14, 18, 27; ಲೂಕ 1:33; ಇಬ್ರಿ. 1:8; ಯೋಹಾ 12:34: 11:16 ಪ್ರಕ 4:4: § 11:16 ಪ್ರಕ 4:10: * 11:17 ಮೂಲ. ಇರುವಾತನೇ, ಇದ್ದಾತನೇ. ಪ್ರಕ 16:5; ಪ್ರಕ 1:4, 8; 4:8: 11:17 ಕೀರ್ತ 97:1; ಪ್ರಕ 19:6: 11:18 ಕೀರ್ತ 2:5; 110:5: § 11:18 ಪ್ರಕ 6:10; 20:12; ದಾನಿ. 7:10; 2 ಥೆಸ. 1:6, 7: * 11:18 ಪ್ರಕ 19:5: 11:18 ಪ್ರಕ 13:10: 11:19 ಪ್ರಕ 15:5: § 11:19 ಇಬ್ರಿ. 9:4: * 11:19 ಪ್ರಕ 16:21: