7
ನಾನು ಗೋಡೆಯನ್ನು ಪುನಃ ಕಟ್ಟಿಸಿ, ಬಾಗಿಲುಗಳನ್ನು ನಿಲ್ಲಿಸಿ, ತರುವಾಯ ಬಾಗಿಲು ಕಾಯುವವರನ್ನು, ಹಾಡುಗಾರರನ್ನು, ಲೇವಿಯರನ್ನು ನೇಮಿಸಿದೆನು. ಆಮೇಲೆ ನಾನು ನನ್ನ ಸಹೋದರನಾದ ಹನಾನೀ ಮತ್ತು ಅರಮನೆಯ ಅಧಿಪತಿಯಾದ ಹನನ್ಯ ಇವರಿಗೆ ಯೆರೂಸಲೇಮಿನ ಜವಾಬ್ದಾರಿಕೆಯನ್ನು ಒಪ್ಪಿಸಿದೆನು. ಏಕೆಂದರೆ ಇವನು ಸತ್ಯವಂತನಾಗಿಯೂ, ಅನೇಕರಿಗಿಂತ ಹೆಚ್ಚಾಗಿ ದೇವರಿಗೆ ಭಯಪಡುವವನಾಗಿಯೂ ಇದ್ದನು. ಆಗ ನಾನು ಅವರಿಗೆ, “ಬಿಸಿಲು ಏರುವುದಕ್ಕಿಂತ ಮೊದಲೇ ಯೆರೂಸಲೇಮಿನ ಬಾಗಿಲುಗಳನ್ನು ತೆರೆಯಬಾರದು. ಇದಲ್ಲದೆ ನೀವು ಸಮೀಪದಲ್ಲಿ ನಿಂತಿರುವಾಗ, ಕದಗಳನ್ನು ಮುಚ್ಚಿ ಅಗುಳಿಗಳನ್ನು ಹಾಕಿರಿ. ಯೆರೂಸಲೇಮಿನ ನಿವಾಸಿಗಳಲ್ಲಿ ಪ್ರತಿ ಮನುಷ್ಯನು ತನ್ನ ಮನೆಗೆ ಎದುರಾಗಿ ಕಾವಲಾಗಿರಲು ನೇಮಿಸಿರಿ,” ಎಂದು ಹೇಳಿದೆನು.
ಹಿಂದಿರುಗಿ ಬಂದ ಸೆರೆಯವರ ಪಟ್ಟಿ
ಪಟ್ಟಣವು ವಿಸ್ತಾರವಾಗಿಯೂ, ದೊಡ್ಡದಾಗಿಯೂ ಇತ್ತು. ಆದರೆ ಅದರಲ್ಲಿರುವ ಜನರು ಕೊಂಚವಾಗಿದ್ದರು. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ. ತರುವಾಯ ಅವರು ವಂಶಾವಳಿಯಿಂದ ಲೆಕ್ಕಿಸುವ ಹಾಗೆ ಶ್ರೇಷ್ಠರನ್ನೂ, ಅಧಿಕಾರಸ್ಥರನ್ನೂ, ಸಾಮಾನ್ಯ ಜನರನ್ನೂ ಸಭೆಯಾಗಿಸೇರಲು, ನನ್ನ ದೇವರು ನನ್ನ ಹೃದಯದಲ್ಲಿ ಪ್ರೇರೇಪಿಸಿದರು. ಆಗ ನಾನು ಮೊದಲು ಬಂದವರ ವಂಶಾವಳಿಯ ಪಟ್ಟಿಯನ್ನು ಕಂಡೆನು. ಅದರಲ್ಲಿ ಬರೆದದ್ದೇನೆಂದರೆ:
 
ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ ಜೆರುಬ್ಬಾಬೆಲನ ಸಂಗಡ ಹಿಂದಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್, ಬಾಣ.
 
ಇಸ್ರಾಯೇಲ್ ಜನಾಂಗದ ಪುರುಷರ ಸಂಖ್ಯೆ:
ಪರೋಷನ ವಂಶಜರು 2,172 ಮಂದಿ ಇದ್ದರು.
ಶೆಫಟ್ಯನ ವಂಶಜರು 372 ಮಂದಿ ಇದ್ದರು.
10 ಆರಹನ ವಂಶಜರು 652 ಮಂದಿ ಇದ್ದರು.
11 ಯೇಷೂವ, ಯೋವಾಬ್ ಎಂಬವರ ಮಕ್ಕಳಲ್ಲಿ ಪಹತ್ ಮೋವಾಬನ ವಂಶಜರು 2,818 ಮಂದಿ ಇದ್ದರು.
12 ಏಲಾಮನ ವಂಶಜರು 1,254 ಮಂದಿ ಇದ್ದರು.
13 ಜತ್ತೂವಿನ ವಂಶಜರು 845 ಮಂದಿ ಇದ್ದರು.
14 ಜಕ್ಕೈನ ವಂಶಜರು 760 ಮಂದಿ ಇದ್ದರು.
15 ಬಿನ್ನೂಯನ ವಂಶಜರು 648 ಮಂದಿ ಇದ್ದರು.
16 ಬೇಬೈನ ವಂಶಜರು 628 ಮಂದಿ ಇದ್ದರು.
17 ಅಜ್ಗಾದನ ವಂಶಜರು 2,322 ಮಂದಿ ಇದ್ದರು.
18 ಅದೋನೀಕಾಮಿನ ವಂಶಜರು 667 ಮಂದಿ ಇದ್ದರು.
19 ಬಿಗ್ವೈ ವಂಶಜರು 2,067 ಮಂದಿ ಇದ್ದರು.
20 ಅದೀನನ ವಂಶಜರು 655 ಮಂದಿ ಇದ್ದರು.
21 ಹಿಜ್ಕೀಯನ ಮಗನಾದ ಆಟೇರ್ ವಂಶಜರು 98 ಮಂದಿ ಇದ್ದರು.
22 ಹಾಷುಮನ ವಂಶಜರು 328 ಮಂದಿ ಇದ್ದರು.
23 ಬೇಚೈಯ ವಂಶಜರು 324 ಮಂದಿ ಇದ್ದರು.
24 ಹಾರೀಫನ ವಂಶಜರು 112 ಮಂದಿ ಇದ್ದರು.
25 ಗಿಬ್ಯೋನನ ವಂಶಜರು 95 ಮಂದಿ ಇದ್ದರು.
 
26 ಬೇತ್ಲೆಹೇಮಿನವರೂ ನೆಟೋಫದವರೂ 188 ಮಂದಿ ಇದ್ದರು.
27 ಅನಾತೋತ್ ಊರಿನವರು 128 ಮಂದಿ ಇದ್ದರು.
28 ಬೇತ್ ಅಜ್ಮಾವೆತಿನವರು 42 ಮಂದಿ ಇದ್ದರು.
29 ಕಿರ್ಯತ್ ಯಾರೀಮ್, ಕೆಫೀರಾ, ಬೇರೋತ್ ಎಂಬ ಪಟ್ಟಣದವರು 743 ಮಂದಿ ಇದ್ದರು.
30 ರಾಮಾ ಗೆಬ ಎಂಬ ಪಟ್ಟಣದವರು 621 ಮಂದಿ ಇದ್ದರು.
31 ಮಿಕ್ಮಾಷದ ಜನರು 122 ಮಂದಿ ಇದ್ದರು.
32 ಬೇತೇಲ್ ಮತ್ತು ಆಯಿ ಎಂಬ ಪಟ್ಟಣದವರು 123 ಮಂದಿ ಇದ್ದರು.
33 ಮತ್ತೊಂದು ನೆಬೋ ಊರಿನವರು 52 ಮಂದಿ ಇದ್ದರು.
34 ಮತ್ತೊಬ್ಬ ಏಲಾಮನ ವಂಶಜರು 1,254 ಮಂದಿ ಇದ್ದರು.
35 ಹಾರಿಮನ ವಂಶಜರು 320 ಮಂದಿ ಇದ್ದರು.
36 ಯೆರಿಕೋವಿನ ವಂಶಜರು 345 ಮಂದಿ ಇದ್ದರು.
37 ಲೋದ್, ಹಾದೀದ್, ಓನೋ ಎಂಬ ಊರಿನ ಜನರು 721 ಮಂದಿ ಇದ್ದರು.
38 ಸೆನಾಹನ ವಂಶಜರು 3,930 ಮಂದಿ ಇದ್ದರು.
 
39 ಯಾಜಕರು:
ಯೇಷೂವನ ಕುಟುಂಬದವರಾದ ಯೆದಾಯನ ವಂಶಜರು 973.
40 ಇಮ್ಮೇರನ ವಂಶಜರು 1,052.
41 ಪಷ್ಹೂರನ ವಂಶಜರು 1,247.
42 ಹಾರಿಮನ ವಂಶಜರು 1,017.
 
43 ಲೇವಿಯರು:
ಹೋದವ್ಯನ ಸಂತತಿಯಾದ ಯೇಷೂವನ, ಕದ್ಮಿಯೇಲನ ವಂಶಜರು 74.
 
44 ಹಾಡುಗಾರರು:
ಆಸಾಫನ 148 ವಂಶಜರು.
 
45 ದೇವಾಲಯದ ದ್ವಾರಪಾಲಕರಾದ,
ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ ಮುಂತಾದವರ ಮಕ್ಕಳು 138.
 
46 ದೇವಾಲಯದ ಸೇವಕರು:
ಜೀಹ, ಹಸೂಫ, ಟಬ್ಬಾವೋತ್,
47 ಕೆರೋಸ್, ಸೀಯ, ಪದೋನ್,
48 ಲೆಬಾನ, ಹಗಾಬ, ಶಲ್ಮೈ,
49 ಹಾನಾನ್, ಗಿದ್ದೇಲ್, ಗಹರ್,
50 ರೆವಾಯ, ರೆಚೀನ್, ನೆಕೋದ,
51 ಗಜ್ಜಾಮ್, ಉಜ್ಜ, ಪಾಸೇಹ,
52 ಬೇಸೈ, ಮೆಯನೀಮ್, ನೆಫೀಸೀಮ್*,
53 ಬಕ್ಬೂಕ್, ಹಕ್ಕೂಫ, ಹರ್ಹೂರ್,
54 ಬಚ್ಲೂತ್, ಮೆಹೀದ, ಹರ್ಷ,
55 ಬರ್ಕೋಸ್, ಸೀಸೆರ, ತೆಮಹ,
56 ನೆಚೀಹ, ಹಟೀಫ, ಇವರ ವಂಶಜರು.
57 ಸೊಲೊಮೋನನ ಸೇವಕರ ವಂಶಜರು:
ಸೋಟೈ, ಸೋಫೆರೆತ್, ಪೆರೀದ,
58 ಯಾಲ, ದರ್ಕೋನ್, ಗಿದ್ದೇಲ್,
59 ಶೆಫಟ್ಯ, ಹಟ್ಟೀಲ್,
ಪೋಕೆರೆತ್ ಹಚ್ಚೆಬಾಯೀಮ್, ಆಮೋನ್ ಮುಂತಾದವರ ಮಕ್ಕಳು.
60 ದೇವಾಲಯದ ಸೇವಕರ ಹಾಗೂ ಸೊಲೊಮೋನನ ಸೇವಕರ ವಂಶಜರು ಒಟ್ಟು 392 ಮಂದಿ.
 
61 ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಹೊರಟುಬಂದವರಾಗಿದ್ದು, ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ, ತಾವು ಇಸ್ರಾಯೇಲರೆಂಬುದನ್ನು ರುಜುಪಡಿಸಲಾಗದೇ ಇದ್ದವರು ಯಾರೆಂದರೆ:
62 ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು ಒಟ್ಟು 642 ಮಂದಿ.
 
63 ಯಾಜಕರಲ್ಲಿ,
ಹಬಯ್ಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು.
ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಪುತ್ರಿಯರಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡ ಕಾರಣ ಅವನ ಹೆಸರನ್ನು ಇಟ್ಟುಕೊಂಡನು.
64 ಇವರು ತಮ್ಮ ವಂಶಾವಳಿಯ ದಾಖಲಾತಿಗಳಲ್ಲಿ ತಮ್ಮ ಹೆಸರುಗಳನ್ನು ಹುಡುಕಿದರು, ಆದರೆ ಅವು ಸಿಕ್ಕದೆ ಹೋದದ್ದರಿಂದ ಅವರು ಅಶುದ್ಧರೆಂದು ಪರಿಗಣಿಸಿ ಯಾಜಕ ಉದ್ಯೋಗದಿಂದ ಬಹಿಷ್ಕಾರವಾದರು. 65 ಆದ್ದರಿಂದ ಊರೀಮ್, ತುಮ್ಮೀಮ್ ಮುಖಾಂತರ ದೈವನಿರ್ಣಯವನ್ನು ತಿಳಿಸಬಲ್ಲ ಯಾಜಕನು ದೊರೆಯುವ ತನಕ, ಇವರು ಮಹಾಪರಿಶುದ್ಧವಾದ ಪದಾರ್ಥಗಳನ್ನು ತಿನ್ನಬಾರದೆಂದು ರಾಜ್ಯಪಾಲನು ಆದೇಶಿಸಿದನು.
 
66 ಸಭೆ ಸೇರಿದ ಸರ್ವಸಮೂಹದ ಒಟ್ಟು ಸಂಖ್ಯೆ 42,360. 67 ಅವರ ಹೊರತಾಗಿ ಅವರ ದಾಸರೂ ದಾಸಿಯರೂ 7,337 ಮಂದಿಯೂ, ಅವರ ಹಾಡುಗಾರರೂ, ಹಾಡುಗಾರ್ತಿಯರೂ 245 ಮಂದಿಯೂ ಇದ್ದರು. 68 ಅವರ 736 ಕುದುರೆಗಳು, ಅವರ 245 ಹೇಸರಕತ್ತೆಗಳು. 69 435 ಒಂಟೆಗಳು, 6,720 ಕತ್ತೆಗಳು ಇದ್ದವು.
 
70 ಕುಟುಂಬಗಳ ಕೆಲವು ಮುಖ್ಯಸ್ಥರು ಕೆಲಸಕ್ಕೆ ಕಾಣಿಕೆಗಳನ್ನು ಕೊಟ್ಟರು. ರಾಜ್ಯಪಾಲನು ಬೊಕ್ಕಸಕ್ಕೆ 8.4 ಕಿಲೋಗ್ರಾಂ ಬಂಗಾರದ ನಾಣ್ಯಗಳನ್ನೂ, 50 ಪಾತ್ರೆಗಳನ್ನೂ, 530 ಯಾಜಕರ ಅಂಗಿಗಳನ್ನೂ ಕೊಟ್ಟನು. 71 ಇದಲ್ಲದೆ ಮುಖ್ಯವಾದ ಪಿತೃಗಳಲ್ಲಿ ಕೆಲವರು ಕೆಲಸದ ಬೊಕ್ಕಸಕ್ಕೆ 170 ಕಿಲೋಗ್ರಾಂ ಬಂಗಾರದ ನಾಣ್ಯಗಳನ್ನೂ, 1.2 ಮೆಟ್ರಿಕ್ ಟನ್ ಬೆಳ್ಳಿಯನ್ನು ಕೊಟ್ಟರು. 72 ಮಿಕ್ಕಾದ ಜನರು ಕೊಟ್ಟದ್ದೇನೆಂದರೆ: 170 ಕಿಲೋಗ್ರಾಂ ಬಂಗಾರದ ನಾಣ್ಯಗಳನ್ನೂ 1.1 ಮೆಟ್ರಿಕ್ ಟನ್ ಬೆಳ್ಳಿಯನ್ನೂ, 67 ಯಾಜಕರ ಅಂಗಿಗಳನ್ನೂ ಕೊಟ್ಟರು.
73 ಹೀಗೆಯೇ ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ಸಾಮಾನ್ಯ ಜನರೂ, ದೇವಾಲಯದ ಸೇವಕರೂ, ಸಮಸ್ತ ಇಸ್ರಾಯೇಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.
ಎಜ್ರನು ದೇವರ ನಿಯಮವನ್ನು ಓದಿದ್ದು
ಏಳನೆಯ ತಿಂಗಳು ಬಂದಾಗ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.
* 7:52 7:52 ನೆಫೀಸೀಮ್ ಅಥವಾ ನೆಫೀಷೆಸೀಮ್