7
ಗೋತ್ರ ನಾಯಕರ ಕಾಣಿಕೆ
ಮೋಶೆಯು ದೇವದರ್ಶನ ಗುಡಾರವನ್ನು ನಿಲ್ಲಿಸಿ, ಅಭಿಷೇಕಿಸಿ ಪರಿಶುದ್ಧ ಮಾಡಿದ ದಿನದಲ್ಲಿ ಅದರ ಎಲ್ಲಾ ಸಲಕರಣೆಗಳನ್ನೂ, ಬಲಿಪೀಠವನ್ನೂ, ಅದರ ಎಲ್ಲಾ ಸಾಮಗ್ರಿಗಳನ್ನೂ ಅಭಿಷೇಕಿಸಿ ಪರಿಶುದ್ಧ ಮಾಡಿದನು. ಅನಂತರ, ಇಸ್ರಾಯೇಲರ ಪ್ರಧಾನರು ಎಂದರೆ ಗೋತ್ರದ ಪ್ರಮುಖರು, ಕುಲಾಧಿಪತಿಗಳು ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು ಕಾಣಿಕೆಗಳನ್ನು ತಂದು ಸಮರ್ಪಿಸಿದರು. ಅವರು ಯೆಹೋವ ದೇವರ ಎದುರಿನಲ್ಲಿ ತಂದ ಅರ್ಪಣೆ ಏನೆಂದರೆ ಆರು ಕಮಾನುಬಂಡಿಗಳು, ಹನ್ನೆರಡು ಎತ್ತುಗಳು, ಪ್ರಧಾನರಲ್ಲಿ ಇಬ್ಬರಿಗೆ ಒಂದು ಬಂಡಿಯಂತೆ, ಒಬ್ಬೊಬ್ಬನಿಗೆ ಒಂದೊಂದು ಎತ್ತುಗಳನ್ನು ಅವರು ದೇವದರ್ಶನ ಗುಡಾರದ ಮುಂದೆ ತಂದರು.
ಯೆಹೋವ ದೇವರು ಮಾತನಾಡಿ ಮೋಶೆಗೆ ಹೇಳಿದ್ದೇನೆಂದರೆ, “ಅವುಗಳನ್ನು ಅವರಿಂದ ತೆಗೆದುಕೋ, ಅವು ದೇವದರ್ಶನ ಗುಡಾರದ ಸೇವೆಮಾಡುವುದಕ್ಕೋಸ್ಕರ ಇರಬೇಕು. ಅವುಗಳನ್ನು ಲೇವಿಯರಿಗೆ ಅವನವನ ಕೆಲಸಕ್ಕೆ ತಕ್ಕಂತೆ ಕೊಡಬೇಕು,” ಎಂದರು.
ಆಗ ಮೋಶೆಯು ಆ ಬಂಡಿಗಳನ್ನೂ, ಎತ್ತುಗಳನ್ನೂ ತೆಗೆದುಕೊಂಡು ಅವುಗಳನ್ನು ಲೇವಿಯರಿಗೆ ಕೊಟ್ಟನು. ಎರಡು ಬಂಡಿಗಳನ್ನೂ, ನಾಲ್ಕು ಎತ್ತುಗಳನ್ನೂ, ಗೇರ್ಷೋನನ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕ ಪ್ರಕಾರ ಕೊಟ್ಟನು. ಯಾಜಕನಾದ ಆರೋನನ ಮಗ ಈತಾಮಾರನ ಕೈಕೆಳಗಿರುವ ನಾಲ್ಕು ಬಂಡಿಗಳನ್ನೂ, ಎಂಟು ಎತ್ತುಗಳನ್ನೂ ಮೆರಾರೀಯ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕಂತೆ ಕೊಟ್ಟನು. ಆದರೆ ಕೊಹಾತ್ಯರಿಗೆ ಯಾವುದನ್ನೂ ಕೊಡಲಿಲ್ಲ. ಏಕೆಂದರೆ ಅವರು ತಮ್ಮ ಹೆಗಲುಗಳ ಮೇಲೆ ಪರಿಶುದ್ಧಸ್ಥಳದ ವಸ್ತುಗಳನ್ನು ಹೊತ್ತುಕೊಂಡು ಹೋಗುವುದೇ ಅವರಿಗೆ ಸೇವೆಯಾಗಿತ್ತು.
10 ಬಲಿಪೀಠವನ್ನು ಅಭಿಷೇಕಿಸಿದ ದಿನದಂದು ಪ್ರತಿಷ್ಠೆಗಾಗಿ ಅದರ ಮುಂದೆ ಬಂದು, ಪ್ರಧಾನರು ತಮ್ಮ ಕಾಣಿಕೆಗಳನ್ನು ಅರ್ಪಿಸಿದರು. 11 ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ಒಬ್ಬೊಬ್ಬ ಪ್ರಧಾನನು ತನ್ನ ತನ್ನ ದಿವಸದಲ್ಲಿ ಬಲಿಪೀಠದ ಪ್ರತಿಷ್ಠೆಗಾಗಿ ತಮ್ಮ ಕಾಣಿಕೆಯನ್ನು ಅರ್ಪಿಸಬೇಕು.”
 
12 ಮೊದಲನೆಯ ದಿವಸದಲ್ಲಿ ತನ್ನ ಕಾಣಿಕೆಯನ್ನು ಅರ್ಪಿಸಿದವನು ಯೆಹೂದ ಗೋತ್ರದ ಅಮ್ಮೀನಾದಾಬನ ಮಗ ನಹಶೋನನು.
13 ಅವನ ಅರ್ಪಣೆ ಏನೆಂದರೆ:
ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್* ತೂಕದ ಚೊಕ್ಕ ಬೆಳ್ಳಿಯ ಒಂದು ತಟ್ಟೆ ಮತ್ತು 70 ಶೆಕೆಲ್ ತೂಕದ ಬೆಳ್ಳಿಯ ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಇವೆರಡು ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
14 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
15 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
16 ದೋಷಪರಿಹಾರಕ ಬಲಿಗಾಗಿ ಒಂದು ಹೋತ,
17 ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳೂ ಸಮಾಧಾನದ ಬಲಿಗಾಗಿ ಸಮರ್ಪಿಸಬೇಕು.
ಇದು ಅಮ್ಮೀನಾದಾಬನ ಮಗ ನಹಶೋನನ ಅರ್ಪಣೆಯು.
 
18 ಎರಡನೆಯ ದಿವಸದಲ್ಲಿ ಇಸ್ಸಾಕಾರನ ಗೋತ್ರದ ಪ್ರಧಾನನಾಗಿರುವ ಚೂವಾರನ ಮಗ ನೆತನೆಯೇಲ್ ಅರ್ಪಿಸಿದನು.
19 ಅವನ ಅರ್ಪಣೆ ಏನೆಂದರೆ:
ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳಿಯ್ಳ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
20 ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
21 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
22 ಪಾಪ ಪರಿಹಾರದ ಬಲಿಗಾಗಿ ಒಂದು ಹೋತ,
23 ಸಮಾಧಾನದ ಬಲಿಗಳ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು.
ಇದು ಚೂವಾರನ ಮಗ ನೆತನೆಯೇಲ್ ಇವನ ಅರ್ಪಣೆಯು.
 
24 ಮೂರನೆಯ ದಿವಸದಲ್ಲಿ ಜೆಬುಲೂನ್ ಮಕ್ಕಳಿಗೆ ಪ್ರಧಾನನಾಗಿರುವ ಹೇಲೋನನ ಮಗ ಎಲೀಯಾಬನು ಅರ್ಪಿಸಿದ್ದು.
25 ಅವನ ಅರ್ಪಣೆ ಏನೆಂದರೆ:
ದೇವರ ಸೇವೆಗೆ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
26 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
27 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
28 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
29 ಮತ್ತು ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು.
ಇದು ಹೇಲೋನನ ಮಗ ಎಲೀಯಾಬನ ಸಮರ್ಪಣೆಯು.
 
30 ನಾಲ್ಕನೆಯ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾನನಾಗಿರುವ ಶೆದೇಯೂರನ ಮಗ ಎಲೀಚೂರನು ಅರ್ಪಿಸಿದನು.
31 ಅವನ ಅರ್ಪಣೆಯು ಏನೆಂದರೆ:
ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
32 ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
33 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
34 ಪಾಪ ಪರಿಹಾರದ ಬಲಿಗಾಗಿ ಒಂದು ಹೋತವನ್ನೂ,
35 ಸಮಾಧಾನದ ಬಲಿಗಾಗಿ ಎರಡು ಹೋರಿಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು.
ಇದು ಶೆದೇಯೂರನ ಮಗ ಎಲೀಚೂರನ ಅರ್ಪಣೆಯು.
 
36 ಐದನೆಯ ದಿನದಲ್ಲಿ ಸಿಮೆಯೋನನ ಗೋತ್ರದ ಪ್ರಧಾನನಾಗಿರುವ ಚುರೀಷದ್ದೈಯನ ಮಗ ಶೆಲುಮೀಯೇಲನು ಅರ್ಪಿಸಿದನು.
37 ಅವನ ಅರ್ಪಣೆಯು ಏನೆಂದರೆ:
ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳಿಯ್ಳ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
38 ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
39 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
40 ಪಾಪ ಪರಿಹಾರದ ಬಲಿಗಾಗಿ ಒಂದು ಹೋತವನ್ನೂ,
41 ಸಮಾಧಾನದ ಬಲಿಗಾಗಿ ಎರಡು ಹೋರಿಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು.
ಇದು ಚುರೀಷದ್ದೈಯನ ಮಗ ಶೆಲುಮೀಯೇಲನ ಅರ್ಪಣೆಯು.
 
42 ಆರನೆಯ ದಿನದಲ್ಲಿ ಗಾದನ ಗೋತ್ರದ ಪ್ರಧಾನನಾಗಿರುವ ದೆವುಯೇಲನ ಮಗ ಎಲ್ಯಾಸಾಫನು ಅರ್ಪಿಸಿದನು.
43 ಅವನ ಅರ್ಪಣೆಯು ಏನೆಂದರೆ:
ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
44 ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
45 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
46 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
47 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು.
ಇದು ದೆವುಯೇಲನ ಮಗ ಎಲ್ಯಾಸಾಫನ ಅರ್ಪಣೆಯು.
 
48 ಏಳನೆಯ ದಿನದಲ್ಲಿ ಎಫ್ರಾಯೀಮ್ ಗೋತ್ರದ ಪ್ರಧಾನನಾದ ಅಮ್ಮೀಹೂದನ ಮಗ ಎಲೀಷಾಮನು ಅರ್ಪಿಸಿದನು.
49 ಅವನ ಅರ್ಪಣೆ ಏನೆಂದರೆ:
ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧಸ್ಥಳದ ಪ್ರಕಾರ 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
50 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
51 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
52 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
53 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು.
ಇದು ಅಮ್ಮೀಹೂದನ ಮಗ ಎಲೀಷಾಮನ ಅರ್ಪಣೆಯು.
 
54 ಎಂಟನೆಯ ದಿನದಲ್ಲಿ ಮನಸ್ಸೆ ಗೋತ್ರದ ಪ್ರಧಾನನಾದ ಪೆದಾಚೂರನ ಮಗ ಗಮಲಿಯೇಲನು ಅರ್ಪಿಸಿದನು.
55 ಅವನ ಅರ್ಪಣೆಯು ಏನೆಂದರೆ:
ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
56 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
57 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
58 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
59 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು.
ಇದು ಪೆದಾಚೂರನ ಮಗ ಗಮಲಿಯೇಲನ ಅರ್ಪಣೆಯು.
 
60 ಒಂಬತ್ತನೆಯ ದಿನದಲ್ಲಿ ಬೆನ್ಯಾಮೀನನ ಗೋತ್ರದ ಪ್ರಧಾನನಾದ ಗಿದ್ಯೋನಿಯ ಮಗ ಅಬೀದಾನನು ಅರ್ಪಿಸಿದನು.
61 ಅವನ ಅರ್ಪಣೆಯು ಏನೆಂದರೆ:
ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
62 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
63 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
64 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
65 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು.
ಇದು ಗಿದ್ಯೋನಿಯ ಮಗ ಅಬೀದಾನನ ಅರ್ಪಣೆಯು.
 
66 ಹತ್ತನೆಯ ದಿನದಲ್ಲಿ ದಾನನ ಗೋತ್ರದ ಪ್ರಧಾನವಾದ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಅರ್ಪಿಸಿದನು.
67 ಅವನ ಅರ್ಪಣೆಯು ಏನೆಂದರೆ:
ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
68 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
69 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
70 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
71 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು.
ಇದು ಅಮ್ಮೀಷದ್ದೈಯನ ಮಗ ಅಹೀಗೆಜೆರನ ಅರ್ಪಣೆಯು.
 
72 ಹನ್ನೊಂದನೆಯ ದಿನದಲ್ಲಿ ಆಶೇರನ ಗೋತ್ರದ ಪ್ರಧಾನನಾದ ಒಕ್ರಾನನ ಮಗ ಪಗೀಯೇಲನು ಅರ್ಪಿಸಿದನು.
73 ಅವನ ಅರ್ಪಣೆಯು ಏನೆಂದರೆ:
ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧಸ್ಥಳದ ಪ್ರಕಾರ 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
74 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
75 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
76 ದೋಷಪರಿಹಾರಕ ಬಲಿಗಾಗಿ ಒಂದು ಹೋತ,
77 ಸಮಾಧಾನದ ಬಲಿಗಾಗಿ ಒಂದು ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು.
ಇದು ಒಕ್ರಾನನ ಮಗ ಪಗೀಯೇಲನ ಅರ್ಪಣೆಯು.
 
78 ಹನ್ನೆರಡನೆಯ ದಿನದಲ್ಲಿ ನಫ್ತಾಲಿಯ ಗೋತ್ರದ ಪ್ರಧಾನನಾದ ಏನಾನನ ಮಗ ಅಹೀರನು ಅರ್ಪಿಸಿದನು.
79 ಅವನ ಅರ್ಪಣೆಯು ಏನೆಂದರೆ:
ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು,
80 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
81 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
82 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
83 ಸಮಾಧಾನದ ಸಮರ್ಪಣೆಯ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು.
ಇದು ಏನಾನನ ಮಗ ಅಹೀರನ ಅರ್ಪಣೆಯು.
 
84 ಇದು ಬಲಿಪೀಠದ ಪ್ರತಿಷ್ಠೆಗಾಗಿ ಅದನ್ನು ಅಭಿಷೇಕ ಮಾಡಿದ ದಿನದಲ್ಲಿ ಇಸ್ರಾಯೇಲಿನ ಪ್ರಧಾನರು ಅರ್ಪಿಸಿದ್ದು:
ಬೆಳ್ಳಿಯ 12 ತಟ್ಟೆಗಳೂ, ಬೆಳ್ಳಿಯ 12 ಬಟ್ಟಲುಗಳೂ, ಬಂಗಾರದ 12 ಚಮಚಗಳೂ, 85 ಬೆಳ್ಳಿಯ ಒಂದೊಂದು ತಟ್ಟೆಗಳ ತೂಕವು 130 ಶೆಕೆಲ್, ಒಂದೊಂದು ಬಟ್ಟಲಿನ ತೂಕವು 70 ಶೆಕೆಲ್. ಬೆಳ್ಳಿಯ ಎಲ್ಲಾ ಸಾಮಗ್ರಿಗಳ ತೂಕ ಪರಿಶುದ್ಧಸ್ಥಳದ ನೇಮದ ಪ್ರಕಾರ 2,400 ಶೆಕೆಲ್§. 86 ಧೂಪ ತುಂಬಿದ್ದ 12 ಬಂಗಾರದ ಚಮಚಗಳು, ಪರಿಶುದ್ಧಸ್ಥಳದ ಪ್ರಕಾರ ಒಂದೊಂದಕ್ಕೆ 10 ಚಮಚಗಳ ಬಂಗಾರವೆಲ್ಲಾ 120 ಶೆಕೆಲ್*,
87 ದಹನಬಲಿಗಾಗಿ ಇರುವ ಒಟ್ಟು ಪಶುಗಳು: 12 ಹೋರಿಗಳು, 12 ಟಗರುಗಳು, ಒಂದು ವರ್ಷದ ಕುರಿಮರಿಗಳು 12, ಅವುಗಳೊಂದಿಗೆ ಧಾನ್ಯ ಸಮರ್ಪಣೆ. ದೋಷಪರಿಹಾರಕ ಬಲಿಗಾಗಿ 12 ಹೋತಗಳು,
88 ಸಮಾಧಾನದ ಬಲಿಗಾಗಿರುವ ಒಟ್ಟು ಪಶುಗಳು: 24 ಹೋರಿಗಳು, 60 ಟಗರುಗಳು, 60 ಹೋತಗಳು, ಒಂದು ವರ್ಷದ ಗಂಡು ಕುರಿಮರಿಗಳು 60.
 
ಅದನ್ನು ಅಭಿಷೇಕಿಸಿದ ತರುವಾಯ ಬಲಿಪೀಠಕ್ಕೆ ಮಾಡಿದ ಪ್ರತಿಷ್ಠೆ ಇದಾಗಿತ್ತು.
 
89 ಮೋಶೆಯು ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದಾಗ, ಅವನು ಒಡಂಬಡಿಕೆಯ ಮಂಜೂಷದ ಮೇಲೆ ಇರುವ ಕರುಣಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವ ಧ್ವನಿಯನ್ನು ಮೋಶೆಯು ಕೇಳಿದನು. ಹೀಗೆ ದೇವರು ಅವನ ಸಂಗಡ ಮಾತನಾಡಿದರು.
* 7:13 ಸುಮಾರು 1.5 ಕಿಲೋಗ್ರಾಂ; ಈ ಅಧ್ಯಾಯದಲ್ಲಿ ಬರುವ ಎಲ್ಲಾ ಕಡೆ 7:13 ಸುಮಾರು 800 ಗ್ರಾಂ; ಈ ಅಧ್ಯಾಯದಲ್ಲಿ ಬರುವ ಎಲ್ಲಾ ಕಡೆ 7:14 ಸುಮಾರು 115 ಗ್ರಾಂ § 7:85 ಸುಮಾರು 28 ಕಿಲೋಗ್ರಾಂ * 7:86 ಸುಮಾರು 1.4 ಕಿಲೋಗ್ರಾಂ