36
ಏಸಾವನ ವಂಶಸ್ಥರು
1ಪೂರ್ವ 2:34-37
1 ಎದೋಮ್ ಎಂಬ ಏಸಾವನ ವಂಶಾವಳಿ ಇದು:
2 ಏಸಾವನು ಕಾನಾನ್ಯರ ಸ್ತ್ರೀಯರನ್ನು ಮದುವೆಮಾಡಿಕೊಂಡನು. ಅವರು ಯಾರೆಂದರೆ, ಹಿತ್ತಿಯನಾದ ಏಲೋನನ ಮಗಳಾಗಿದ್ದ ಆದಾ, ಹಿವ್ವಿಯನಾದ ಸಿಬಿಯೋನನ ಮಗಳಾದ ಅನಾಹಳ ಮಗಳು ಒಹೊಲೀಬಾಮಳನ್ನು,
3 ಮತ್ತು ಇಷ್ಮಾಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿದ್ದ ಬಾಸೆಮತ್ ಇವರನ್ನು ಮದುವೆಯಾಗಿದ್ದನು.
4 ಆದಾಳು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು.
5 ಒಹೊಲೀಬಾಮಳು ಯೆಗೂಷನನ್ನು ಯಳಾಮನನ್ನೂ, ಕೋರಹನನ್ನು ಹೆತ್ತಳು. ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಮಕ್ಕಳು ಇವರೇ.
6 ತರುವಾಯ ಏಸಾವನು ತನ್ನ ಹೆಂಡತಿಯರನ್ನೂ, ಗಂಡುಹೆಣ್ಣು ಮಕ್ಕಳನ್ನೂ, ತನ್ನ ಮನೆಗೆ ಸೇರಿದ ಸೇವಕರೆಲ್ಲರನ್ನೂ, ತನಗಿದ್ದ ಎಲ್ಲಾ ಪಶುಪ್ರಾಣಿಗಳ ಹಿಂಡುಗಳನ್ನೂ ಕಾನಾನ್ ದೇಶದಲ್ಲಿ ಸಂಪಾದಿಸಿದ್ದ ಆಸ್ತಿಯೆಲ್ಲವನ್ನೂ ತೆಗೆದುಕೊಂಡು ತನ್ನ ತಮ್ಮನಾದ ಯಾಕೋಬನ ಬಳಿಯಿಂದ ಬೇರೆ ದೇಶಕ್ಕೆ ಹೊರಟುಹೋದನು.
7 ಅವರ ಸಂಪತ್ತು ಹೆಚ್ಚಿದ್ದದರಿಂದ ಅವರಿಬ್ಬರೂ ಒಂದೇ ಸ್ಥಳದಲ್ಲಿರುವುದಕ್ಕೆ ಸಾಧ್ಯವಿರಲಿಲ್ಲ. ಅವರಿಗೆ ಪಶುಪ್ರಾಣಿಗಳು ಬಹಳವಾಗಿದ್ದುದರಿಂದ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು.
8 ಹೀಗೆ ಏಸಾವನು ಸೇಯೀರ್ ಬೆಟ್ಟದ ಸೀಮೆಗೆ ಹೋಗಿ ಅಲ್ಲೇ ವಾಸವಾಗಿದ್ದನು. ಏಸಾವನೆಂದರೆ ಎದೋಮನು.
9 ಸೇಯೀರ್ ಬೆಟ್ಟದ ಸೀಮೆಯಲ್ಲಿದ್ದ ಎದೋಮ್ಯರ ಮೂಲಪುರುಷನಾದ ಏಸಾವನ ವಂಶದ ಚರಿತ್ರೆ:
10 ಏಸಾವನ ಮಕ್ಕಳ ಹೆಸರುಗಳು ಯಾವುವೆಂದರೆ: ಎಲೀಫಜನು, ಏಸಾವನ ಹೆಂಡತಿಯಾದ ಆದಾ ಎಂಬಾಕೆಯ ಮಗನು. ರೆಗೂವೇಲನು ಏಸಾವನ ಹೆಂಡತಿಯಾದ ಬಾಸೆಮತಳ ಮಗನು.
11 ಎಲೀಫಜನ ಮಕ್ಕಳು ಯಾರೆಂದರೆ: ತೇಮಾನ್, ಓಮಾರ್, ಚೆಫೋ, ಗತಾಮ್, ಕೆನೆಜ್,
12 ತಿಮ್ನ ಎಂಬವಳು ಏಸಾವನ ಮಗನಾದ ಎಲೀಫಜನಿಗೆ ಉಪಪತ್ನಿಯಾಗಿದ್ದು ಆಕೆಯು ಅವನಿಗೆ ಅಮಾಲೇಕನನ್ನು ಹೆತ್ತಳು. ಇವರೇ ಏಸಾವನ ಹೆಂಡತಿಯಾದ ಆದಾ ಎಂಬಾಕೆಯ ಮಕ್ಕಳು.
13 ರೆಗೂವೇಲನ ಮಕ್ಕಳು ಯಾರೆಂದರೆ: ನಹತ್, ಜೆರಹ, ಶಮ್ಮಾ ಮಿಜ್ಜಾ ಇವರು ಏಸಾವನ ಹೆಂಡತಿಯಾದ ಬಾಸೆಮತಳ ಪುತ್ರರು.
14 ಏಸಾವನ ಹೆಂಡತಿಯಾದ ಸಿಬಿಯೋನನ ಮಗಳಾದ ಅನಾಹನ ಮಗಳಾದ ಒಹೊಲೀಬಾಮಳ ಮಕ್ಕಳು ಯಾರೆಂದರೆ: ಯೆಗೂಷ್ ವಂಶಸ್ಥರನ್ನು, ಯಳಾಮ ಕೋರಹ ಇವರನ್ನು ಹೆತ್ತಳು.
15 ಏಸಾವನ ಪುತ್ರರ ಮುಖಂಡರು ಯಾರೆಂದರೆ: ಏಸಾವನ ಚೊಚ್ಚಲ ಮಗನಾದ ಎಲೀಫಜನಿಂದ ಹುಟ್ಟಿದವರು ಯಾರೆಂದರೆ: ತೇಮಾನ್, ಓಮಾರ್, ಚೆಫೋ, ಕೆನೆಜ್,
16 ಕೋರಹ, ಗತಾಮ್, ಅಮಾಲೇಕ್, ಇವರೇ, ಈ ಕುಲಪತಿಗಳು ಎದೋಮ್ಯರ ದೇಶದಲ್ಲಿದ್ದ ಎಲೀಫಜನಿಂದ ಬಂದವರು. ಇವರು ಆದಾಳ ಮೊಮ್ಮಕ್ಕಳು.
17 ಏಸಾವನ ಮಗನಾದ ರೆಗೂವೇಲನಿಗೆ ಹುಟ್ಟಿದವರು ಯಾರೆಂದರೆ: ನಹತ್, ಜೆರಹ, ಶಮ್ಮಾ, ಮಿಜ್ಜಾ ಎಂಬ ಕುಲನಾಯಕರು ಹುಟ್ಟಿದರು. ಇವರು ಎದೋಮ್ಯರ ದೇಶದಲ್ಲಿ ಏಸಾವನ ಹೆಂಡತಿಯಾದ ಬಾಸೆಮತಳಿಗೆ ಹುಟ್ಟಿದ ಮೊಮ್ಮಕ್ಕಳು.
18 ಏಸಾವನ ಹೆಂಡತಿಯಾಗಿದ್ದ ಒಹೊಲೀಬಾಮಳ ಮಗಳಾದ ಅನಾಳ ಸಂತಾನದ ಕುಲನಾಯಕರು ಯಾರೆಂದರೆ: ಯೆಗೂಷ್, ಯಳಾಮ, ಮತ್ತು ಕೋರಹ. ಇವರೇ ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ ಒಹೊಲೀಬಾಮಳ ಸಂತಾನದವರು.
19 ಎದೋಮನೆನ್ನಿಸಿಕೊಳ್ಳುವ ಏಸಾವನಿಂದ ಹುಟ್ಟಿದ ಕುಲಗಳಿಗೆ ಇವರೇ ಮುಖಂಡರು.
ಸೇಯೀರನ ವಂಶಸ್ಥರು
1ಪೂರ್ವ 1:38-42
20 ಆ ಸೀಮೆಯ ಮೂಲನಿವಾಸಿಗಳು ಹೋರಿಯನಾದ ಸೇಯೀರಿನಿಂದ ಹುಟ್ಟಿದವರು. ಅವರು ಯಾರೆಂದರೆ: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,
21 ದೀಶೋನ್, ಏಚೆರ್, ದೀಶಾನ್ ಇವರು ಎದೋಮ್ಯರ ದೇಶದಲ್ಲಿ ಸೇಯೀರನ ಸಂತತಿಯವರಾದ ಹೋರಿಯಲ್ಲಿ ಹುಟ್ಟಿದ ಮುಖಂಡರು.
22 ಲೋಟಾನನ ಮಕ್ಕಳು: ಹೋರಿ, ಹೇಮಾಮ್, ಲೋಟಾನನ ತಂಗಿ ತಿಮ್ನಾ.
23 ಶೋಬಾಲನ ಮಕ್ಕಳು: ಅಲ್ವಾನ್, ಮಾನಹತ್, ಗೇಬಾಲ್, ಶೆಫೋ ಮತ್ತು ಓನಾಮ್.
24 ಸಿಬೆಯೋನನ ಮಕ್ಕಳು: ಅಯ್ಯಾ ಮತ್ತು ಅನಾಹ ಎಂಬವರು. ಈ ಅನಾಹನೇ ತನ್ನ ತಂದೆಯಾದ ಸಿಬಿಯೋನನ ಕತ್ತೆಗಳನ್ನು ಮೇಯಿಸುತ್ತಿದ್ದಾಗ ಕಾಡಿನಲ್ಲಿ ಬಿಸಿ ನೀರಿನ ಒರತೆಗಳನ್ನು ಕಂಡುಕೊಂಡವನು.
25 ಅನಾಹನ ಮಕ್ಕಳು: ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು.
26 ದೀಶೋನನ ಮಕ್ಕಳು: ಹೆಮ್ದಾನ್, ಎಷ್ಬಾನ್, ಇತ್ರಾನ್, ಕೆರಾನ್.
27 ಏಚೆರನ ಮಕ್ಕಳು: ಬಿಲ್ಹಾನ್, ಜಾವಾನ್, ಅಕಾನ್.
28 ದೀಶಾನನ ಮಕ್ಕಳು: ಊಚ್ ಮತ್ತು ಅರಾನ್.
29 ಹೋರಿಯರಿಂದ ಹುಟ್ಟಿದ ಮುಖಂಡರು: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ
30 ದೀಶೋನ್, ಏಚೆರ್, ದೀಶಾನ್ ಇವರೇ. ಇವರು ಹೋರಿಯರಿಂದ ಹುಟ್ಟಿದವರಾಗಿ ಸೇಯೀರ್ ಸೀಮೆಯಲ್ಲಿ ಅಧಿಪತ್ಯ ನಡಿಸಿದ ಮುಖಂಡರು.
ಎದೋಮ್ಯರ ಅರಸುಗಳು
1ಪೂರ್ವ 1:43-54
31 ಇಸ್ರಾಯೇಲ್ಯರ ಅರಸರು ಆಳುವುದಕ್ಕಿಂತ ಮೊದಲು ಎದೋಮ್ಯರ ದೇಶದಲ್ಲಿ ಆಳುತ್ತಿದ್ದ ಅರಸರ ಚರಿತ್ರೆ:
32 ಬೆಯೋರನ ಮಗನಾದ ಬೆಲಗನು ಎದೋಮ್ಯರನ್ನು ಆಳಿದನು. ಅವನ ಪಟ್ಟಣದ ಹೆಸರು ದಿನ್ಹಾಬಾ.
33 ಬೆಲಗನು ಸತ್ತ ನಂತರ ಬೊಚ್ರದವನಾದ ಜೆರಹನ ಮಗನಾಗಿದ್ದ ಯೋಬಾಬನು ಅಧಿಪತ್ಯಕ್ಕೆ ಬಂದನು.
34 ಯೋಬಾಬನು ಸತ್ತ ನಂತರ ತೇಮಾನೀಯರ ಹುಷಾಮನು ಅವನಿಗೆ ಬದಲಾಗಿ ಆಳಿದನು.
35 ಹುಷಾಮನು ಸತ್ತ ನಂತರ ಮೋವಾಬ್ಯರ ಬಯಲಿನಲ್ಲಿ ಮಿದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಅವೀತ್.
36 ಹದದನು ಸತ್ತ ನಂತರ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು.
37 ಸಮ್ಲಾಹನು ಸತ್ತ ಮೇಲೆ ನದಿ ತೀರದಲ್ಲಿರುವ ರೆಹೋಬೋತೂರಿನ ಸೌಲನು ಅರಸನಾದನು.
38 ಸೌಲನು ಸತ್ತ ನಂತರ ಅಕ್ಬೋರನ ಮಗನಾದ ಬಾಳ್ಹಾನಾನನು ಅರಸನಾದನು.
39 ಅಕ್ಬೋರನ ಮಗನಾದ ಬಾಳ್ಹಾನಾನನು ಸತ್ತ ಮೇಲೆ ಹದರನು ಅರಸನಾದನು. ಅವನ ರಾಜಧಾನಿಯ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್; ಆಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
40 ಸ್ಥಳ, ಕುಲ, ಹೆಸರುಗಳ ಪ್ರಕಾರವಾಗಿ ಏಸಾವನಿಂದ ಹುಟ್ಟಿದ ಕುಲಪತಿಗಳ ಹೆಸರುಗಳು ಯಾವುವೆಂದರೆ: ತಿಮ್ನ, ಅಲ್ವಾ, ಯೆತೇತ,
41 ಒಹೋಲಿಬಾಮ, ಏಲಾ, ಪೀನೋನ್,
42 ಕೆನೆಜ್, ತೇಮಾನ್, ಮಿಪ್ಚಾರ್
43 ಮಗ್ದೀಯೇಲ್ ಗೀರಾಮ್ ಇವರೇ ತಮ್ಮ ದೇಶದ ನಿವಾಸ ಸ್ಥಳಗಳ ಪ್ರಕಾರ ಎದೋಮ್ಯರ ಮುಖಂಡರು. ಈ ಎದೋಮ್ಯರ ಮೂಲ ಪುರುಷನೇ ಏಸಾವನು.